RRB Group D Recruitment 2026: 22,000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ

RRB Group D Recruitment 2026 – ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೇ ಇಲಾಖೆ ದೇಶದ ಅತ್ಯಂತ ದೊಡ್ಡ ಸರ್ಕಾರಿ ಉದ್ಯೋಗ ನೀಡುವ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ರೈಲ್ವೇ ಉದ್ಯೋಗ ಪಡೆಯುವ ಕನಸಿನಿಂದ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇದೇ ಸಾಲಿನಲ್ಲಿ ರೈಲ್ವೇ ನೇಮಕಾತಿ ಮಂಡಳಿಗಳು (RRB) ಇದೀಗ ಗ್ರೂಪ್-ಡಿ (ಹಂತ–1) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿವೆ.

ಈ ಅಧಿಸೂಚನೆಯ ಮೂಲಕ 22,000ಕ್ಕೂ ಹೆಚ್ಚು ತಾತ್ಕಾಲಿಕ ಹಾಗೂ ಶಾಶ್ವತ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಇದು 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದ್ದು, ಕಡಿಮೆ ವಿದ್ಯಾರ್ಹತೆಯೊಂದಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇದು ಉತ್ತಮ ದಾರಿ ಎಂದು ಹೇಳಬಹುದು.

ಪ್ರತಿ ವರ್ಷ ಲಕ್ಷಾಂತರ ಯುವಕರು ಒಂದೇ ಕನಸಿನೊಂದಿಗೆ ದಿನಗಳನ್ನು ಕಳೆಯುತ್ತಾರೆ – ಒಮ್ಮೆ ರೈಲ್ವೇಯಲ್ಲಿ ಸರ್ಕಾರಿ ಉದ್ಯೋಗ ಸಿಕ್ಕರೆ ಸಾಕು! ಉತ್ತಮ ವೇತನ, ಭದ್ರ ಉದ್ಯೋಗ, ಪಿಂಚಣಿ, ಕುಟುಂಬಕ್ಕೆ ಭವಿಷ್ಯದ ಭರವಸೆ… ಈ ಎಲ್ಲ ಕಾರಣಗಳಿಂದ ಭಾರತೀಯ ರೈಲ್ವೇ ಉದ್ಯೋಗ ಎಂದರೆ ಸಾಮಾನ್ಯ ಕೆಲಸವಲ್ಲ, ಅದು ಒಂದು ಜೀವನದ ಗುರಿ.

ರೈಲ್ವೇ ಉದ್ಯೋಗ ಕನಸು ನೋಡ್ತಿದ್ದೀರಾ?

ಹೌದಾದ್ರೆ ಈ ಸುದ್ದಿ ನಿಮ್ಮ ಜೀವನವನ್ನೇ ಬದಲಾಯಿಸಬಹುದು! ಭಾರತೀಯ ರೈಲ್ವೇ ಇಲಾಖೆ 2026ರಲ್ಲೇ 22,000ಕ್ಕೂ ಅಧಿಕ ಗ್ರೂಪ್-ಡಿ ಹುದ್ದೆಗಳ ಭರ್ಜರಿ ನೇಮಕಾತಿ ಪ್ರಕಟಿಸಿದೆ. 10ನೇ ತರಗತಿ ಪಾಸಾದವರಿಗೆ ಇದು ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಸುವರ್ಣಾವಕಾಶ. ಅರ್ಜಿ ದಿನಾಂಕ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಎಲ್ಲವೂ ತಿಳಿಯದೇ ಇದ್ದರೆ ಈ ಅವಕಾಶ ಕೈ ತಪ್ಪಬಹುದು!

RRB Group D Recruitment 2026 – ಮುಖ್ಯಾಂಶಗಳು

  • ನೇಮಕಾತಿ ಸಂಸ್ಥೆ: ರೈಲ್ವೇ ನೇಮಕಾತಿ ಮಂಡಳಿ (RRB)
  • ಹುದ್ದೆ ಹೆಸರು: ಗ್ರೂಪ್-ಡಿ (Level–1)
  • ಒಟ್ಟು ಹುದ್ದೆಗಳು: 22,000+
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ
  • ಅರ್ಜಿ ವಿಧಾನ: ಆನ್‌ಲೈನ್
  • ಅಧಿಕೃತ ವೆಬ್ಸೈಟ್: rrbapply.gov.in

RRB Group D Recruitment 2026 – ಪ್ರಮುಖ ದಿನಾಂಕಗಳು

ರೈಲ್ವೇ ಗ್ರೂಪ್-ಡಿ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಅಭ್ಯರ್ಥಿಗಳು ತಪ್ಪದೆ ಗಮನಿಸಬೇಕು:

  • ಅಧಿಸೂಚನೆ ಬಿಡುಗಡೆ ದಿನಾಂಕ: 30 ಜನವರಿ 2026
  • ಆನ್‌ಲೈನ್ ಅರ್ಜಿ ಪ್ರಾರಂಭ: 31 ಜನವರಿ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮಾರ್ಚ್ 2026
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 02 ಮಾರ್ಚ್ 2026
  • CBT ಪರೀಕ್ಷೆ ದಿನಾಂಕ: ಶೀಘ್ರವೇ ಪ್ರಕಟಿಸಲಾಗುವುದು
  • ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷೆಗೆ ಕೆಲ ದಿನಗಳ ಮೊದಲು
  • ಫಲಿತಾಂಶ ದಿನಾಂಕ: ನಂತರ ಪ್ರಕಟಣೆ

ಅರ್ಜಿ ಶುಲ್ಕ ವಿವರ

ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕು:

  • ಜನರಲ್ / OBC / EWS ಅಭ್ಯರ್ಥಿಗಳು: ₹500 (+ 18% GST)
  • SC / ST / PwBD / Ex-Servicemen ಅಭ್ಯರ್ಥಿಗಳು: ₹250 (+ 18% GST)

ಶುಲ್ಕ ಪಾವತಿ ವಿಧಾನಗಳು:

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, IMPS, ಮೊಬೈಲ್ ವಾಲೆಟ್

ಒಟ್ಟು ಹುದ್ದೆಗಳ ವರ್ಗವಾರು ವಿವರ

ಈ ನೇಮಕಾತಿಯ ಮೂಲಕ ಒಟ್ಟು 22,000ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿದ್ದು, ಅವುಗಳನ್ನು ವರ್ಗವಾರು ಹಂಚಿಕೆ ಮಾಡಲಾಗಿದೆ:

ಜನರಲ್: 9,235 ಹುದ್ದೆಗಳು
EWS.    : 2,237 ಹುದ್ದೆಗಳು
OBC.    : 5,217 ಹುದ್ದೆಗಳು
SC        : 3,231 ಹುದ್ದೆಗಳು
ST        : 1,726 ಹುದ್ದೆಗಳು

RRB Group D ಹುದ್ದೆಗಳ ಹೆಸರುಗಳು

RRB Group D ನೇಮಕಾತಿಯಲ್ಲಿ ವಿವಿಧ ತಾಂತ್ರಿಕ ಹಾಗೂ ಅತಾಂತ್ರಿಕ ಹುದ್ದೆಗಳು ಸೇರಿವೆ:

  • ಪಾಯಿಂಟ್ಸ್ಮ್ಯಾನ್ – ಬಿ
  • ಟ್ರ್ಯಾಕ್ ಮೆಂಟೈನರ್ ಜ್ಯೂನಿಯರ್
  • ಸಹಾಯಕ (ಟ್ರ್ಯಾಕ್ ಮಷಿನ್)
  • ಸಹಾಯಕ (ಬ್ರಿಡ್ಜ್)
  • ಸಹಾಯಕ P-Way
  • ಸಹಾಯಕ (C & W)
  • ಸಹಾಯಕ (TRD)
  • ಸಹಾಯಕ (S & T)
  • ಸಹಾಯಕ ಲೋಕೋ ಶೆಡ್ (ಡೀಸೆಲ್)
  • ಸಹಾಯಕ ಲೋಕೋ ಶೆಡ್ (ಎಲೆಕ್ಟ್ರಿಕಲ್)
  • ಸಹಾಯಕ ಆಪರೇಶನ್ಸ್ (ಎಲೆಕ್ಟ್ರಿಕಲ್)
  • ಸಹಾಯಕ TL & AC
  • ಸಹಾಯಕ TL & AC (ವರ್ಕ್‌ಶಾಪ್)
  • ಸಹಾಯಕ (ವರ್ಕ್‌ಶಾಪ್ – ಮೆಕಾನಿಕಲ್)

RRB Group D ವಿದ್ಯಾರ್ಹತೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಯಾವುದೇ ಒಂದನ್ನು ಹೊಂದಿರಬೇಕು:

  • ಮಾನ್ಯತೆ ಪಡೆದ ಶಾಲೆಯಿಂದ 10ನೇ ತರಗತಿ (SSLC) ಪೂರ್ಣಗೊಳಿಸಿರಬೇಕು
  • ಅಥವಾ NCVT ಯಿಂದ ನೀಡಲಾದ National Apprenticeship Certificate (NAC) ಹೊಂದಿರಬೇಕು

ಹೆಚ್ಚಿನ ತಾಂತ್ರಿಕ ಪದವಿಗಳ ಅಗತ್ಯವಿಲ್ಲ, ಆದ್ದರಿಂದ ಗ್ರಾಮೀಣ ಹಾಗೂ ಸಾಮಾನ್ಯ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ.

ವಯಸ್ಸಿನ ಮಿತಿ (01-01-2026ಕ್ಕೆ ಅನ್ವಯ)

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 36 ವರ್ಷಗಳು

ವಯೋಮಿತಿ ಸಡಿಲಿಕೆ:

  • OBC: 3 ವರ್ಷ
  • SC/ST: 5 ವರ್ಷ
  • PwBD: 10 ವರ್ಷ
  • ಮಾಜಿ ಸೈನಿಕರು: ನಿಯಮಾನುಸಾರ

ಆಯ್ಕೆ ಪ್ರಕ್ರಿಯೆ – RRB Group D

RRB Group D ನೇಮಕಾತಿಯ ಆಯ್ಕೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ:

1️⃣ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT – 1)
ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಗಣಿತ, ತಾರ್ಕಿಕ ಸಾಮರ್ಥ್ಯ ಮತ್ತು ಸಾಮಾನ್ಯ ವಿಜ್ಞಾನ          ಪ್ರಶ್ನೆಗಳು ಇರಲಿವೆ.
2️⃣ ದೈಹಿಕ ಸಾಮರ್ಥ್ಯ ಪರೀಕ್ಷೆ (PET)
CBT ಪಾಸ್ ಆದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಬೇಕು.
3️⃣ ದಾಖಲೆ ಪರಿಶೀಲನೆ
ಶೈಕ್ಷಣಿಕ ಹಾಗೂ ಇತರ ದಾಖಲೆಗಳ ಪರಿಶೀಲನೆ ನಡೆಯುತ್ತದೆ.
4️⃣ ವೈದ್ಯಕೀಯ ಪರೀಕ್ಷೆ
ಅಭ್ಯರ್ಥಿಯ ಆರೋಗ್ಯ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ – Step by Step Guide

1️⃣ rrbapply.gov.in ಗೆ ಭೇಟಿ ನೀಡಿ
2️⃣ New Registration ಮೇಲೆ ಕ್ಲಿಕ್ ಮಾಡಿ
3️⃣ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ
4️⃣ ದಾಖಲೆಗಳನ್ನು ಅಪ್ಲೋಡ್ ಮಾಡಿ
5️⃣ ಅರ್ಜಿ ಶುಲ್ಕ ಪಾವತಿಸಿ
6️⃣ ಫಾರ್ಮ್ ಸಬ್

RRB Group D Apply Online Direct Link

👉 https://www.rrbapply.gov.in

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು

  • ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬೇಡಿ
  • ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದಾಗುತ್ತದೆ
  • ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ
  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ

RRB Group D ಉದ್ಯೋಗದ ಲಾಭಗಳು

  • ಕೇಂದ್ರ ಸರ್ಕಾರಿ ಉದ್ಯೋಗ
  • ಉತ್ತಮ ವೇತನ + DA
  • ಪಿಂಚಣಿ ಸೌಲಭ್ಯ
  • ಉಚಿತ ವೈದ್ಯಕೀಯ ಚಿಕಿತ್ಸೆ
  • ಉದ್ಯೋಗ ಭದ್ರತೆ

“ರೈಲ್ವೇ ಉದ್ಯೋಗ ಸಿಕ್ಕರೆ ಜೀವನ ಹೇಗಿರುತ್ತೆ?”

ಒಮ್ಮೆ ಕಲ್ಪನೆ ಮಾಡಿ…

  • ಪ್ರತಿ ತಿಂಗಳು ಖಚಿತ ಸಂಬಳ
  • ವರ್ಷಕ್ಕೆ increment
  • ಕುಟುಂಬಕ್ಕೆ medical facility
  • ಮಕ್ಕಳಿಗೆ ಶಿಕ್ಷಣ ಭದ್ರತೆ
  • ನಿವೃತ್ತಿಯ ನಂತರ ಪಿಂಚಣಿ

ಇದೆಲ್ಲಾ ಒಂದು Group D ಹುದ್ದೆಯಿಂದ ಸಾಧ್ಯವೇ?
ಹೌದು, ಭಾರತೀಯ ರೈಲ್ವೇಯಲ್ಲಿ ಇದು ನಿಜ.

ಅದಕ್ಕೇ ರೈಲ್ವೇ ನೇಮಕಾತಿಗೆ ಲಕ್ಷಾಂತರ ಅರ್ಜಿಗಳು ಬರುತ್ತವೆ.
ಆದರೆ ಅರ್ಜಿ ಹಾಕುವುದರಿಂದ ಮಾತ್ರ ಸಾಕಾಗಲ್ಲ – ಸರಿಯಾದ ಮಾಹಿತಿ + ಸರಿಯಾದ ಸಮಯ ಬೇಕು.

ಈ ಲೇಖನವನ್ನು ನೀವು ಯಾಕೆ ಸಂಪೂರ್ಣ ಓದಬೇಕು?

ಈ articleನಲ್ಲಿ ನೀನು ತಿಳಿದುಕೊಳ್ಳುವದು:

✔️ RRB Group D Recruitment 2026 ಸಂಪೂರ್ಣ ವಿವರ
✔️ ಯಾರು ಅರ್ಹರು, ಯಾರು ಅಲ್ಲ
✔️ ಅರ್ಜಿ ಸಲ್ಲಿಸುವಾಗ ಮಾಡಬಾರಾದ ತಪ್ಪುಗಳು
✔️ selection process inside details
✔️ physical test ಬಗ್ಗೆ real clarity
✔️ railway job life reality

ಕೊನೆಯ ಮಾತು

RRB Group D Recruitment 2026
ಇದು ಕೇವಲ ಇನ್ನೊಂದು ನೇಮಕಾತಿ ಸುದ್ದಿ ಅಲ್ಲ.
ಇದು ಲಕ್ಷಾಂತರ ಯುವಕರ ಭವಿಷ್ಯಕ್ಕೆ ತೆರೆದ ಬಾಗಿಲು.
ನೀವು 10ನೇ ತರಗತಿ ಪಾಸಾದವರಾದರೆ,
ನೀವು ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದರೆ,
ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.

 

1 thought on “RRB Group D Recruitment 2026: 22,000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ”

Leave a Comment

Index